== ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೆ (ಎಲ್‌ಸಿಡಿ)- ದೂರದರ್ಶನ ಯಂತ್ರ, (ಟಿ ವಿ) == ಈ ಪ್ರಕಾರದ ಟಿ.ವಿ. ಗಳು ಎಲ್ ಸಿ ಡಿ ಪ್ರದರ್ಶಕ ಎಂಬ ತಂತ್ರಜ್ಙಾನವನ್ನು ಚಿತ್ರಗಳ ಪ್ರಸರಣಕ್ಕೆ ಬಳಸಿಕೊಳ್ಳುತ್ತದೆ. ಇವುಗಳು ಕ್ಯಾಥೋಡ್ ರೆ ಟಿ ವಿ () ಗಳಿಗೆ ಹೋಲಿಸಿದರೆ ತೆಳುವಾಗಿಯೂ, ಕಡಿಮೆ ತೂಕದವುಗಳೂ ಆಗಿರುತ್ತವೆ. ಇವುಗಳ ಪ್ರದರ್ಶಕ ತೆರೆಗಳ ( ) ಗಾತ್ರವೂ ದೊಡ್ಡದಿರುತ್ತದೆ. ೨೦೦೭ ನೇ ಇಸವಿಯನಂತರ ಈ ರೀತಿಯ ಟಿವಿ ಗಳ ಜನಪ್ರಿಯತೆ ಹೆಚ್ಹಾಯಿತು. === ಎಲ್ ಇ ಡಿ - ಲೈಟ್ ಎಮಿಟಿಂಗ್ ಡಯೋಡ್ ಟಿ ವಿ === ಇವುಗಳೂ ಕೂಡಾ ಎಲ್ ಸಿ ಡಿ ಟಿ ವಿ ಗಳೇ ಆದರೆ ಇವುಗಳು ಎಲ್ ಇ ಡಿ ಯನ್ನು ಬೆಳಕಿನ ಪ್ರಸರಣಕ್ಕಾಗಿ ಬಳಸಿಕೊಳ್ಳುತ್ತದೆ. ==== ತಂತ್ರಜ್ಙಾನ ==== ಎಲ್ ಸಿ ಡಿ ಟಿವಿ ಗಳು ಹಿಂಭಾಗದಲ್ಲಿ ಅಳವಡಿಸಿರುವ ಕೋಲ್ಡ್ ಕ್ಯಾಥೊಡ್ ಪ್ಲೊರೋಸೆಂಟ್ ಲ್ಯಾಂಪ್ () ಗಳ ಮೂಲಕ ಬೆಳಕನ್ನು ಪಡೆದು ಚಿತ್ರಗಳನ್ನು ಬಿತ್ತರಿಸುತ್ತವೆ. ಎಲ್ ಇ ಡಿ ಟಿವಿ ಗಳು ತೆರೆಯ ಸುತ್ತಾ ಇರುವ ಹಲಗೆ (ಪ್ಯಾನೆಲ್) ಯಲ್ಲಿ ಅಳವಡಿಸಿರುವ ಲೈಟ್ ಎಮಿಟಿಂಗ್ ಡಯೋಡ್ ಗಳ ಮೂಲಕ ಬೆಳಕನ್ನು ಪಡೆದು ಚಿತ್ರಗಳನ್ನು ಬಿತ್ತರಿಸುತ್ತವೆ. ಇದರಿಂದಾಗಿ ಈ ಪ್ರಕಾರದ ಟಿವಿ ಗಳು ಎಲ್ ಸಿ ಡಿ ಟಿವಿ ಗಳಿಗಿಂತ ತೆಳ್ಳಗಿರುತ್ತವೆ. ===== ಎಲ್ ಸಿ ಡಿ ಯ ತುಲನೆಯಲ್ಲಿ ಎಲ್ ಇ ಡಿ ಯ ವೈಶಿಷ್ಟ್ಯ ಗಳು ===== - ಇವುಗಳು ತೆಳುವಾಗಿರುತ್ತವೆ - ಚಿತ್ರಗಳ ಪ್ರಖರತೆ ಹೆಚ್ಚು - ಉತ್ತಮ ವೀಕ್ಷಿಸುವ ಕೋನ - ಬಾಳಿಕೆ ಹೆಚ್ಚು - ಕಡಿಮೆ ವಿದ್ಯುತ್ ಬಳಕೆ. ====== ಪರಾಮರ್ಶಿಸಿದ ಕೊಂಡಿಗಳು ====== ://../----/13099/ ://..////. ://..//LCD_TV ://..//LED_TV